ನನ್ನ ಗುರಿ - ಎಲ್ಲರಿಗೂ ಅಭಿವೃದ್ಧಿಯ ಸಮಪಾಲು

My-Aimಪ್ರತಿಸಲ ಮತದಾರನ ಮನ್ನಣೆ ಪಡೆದು, ವಿಧಾನ ಸಭೆಗೆ ಆಯ್ಕೆಯಾದಾಗ ಕಣ್ಮುಂದೆ ಮೊದಲು ಬರುವುದು ಕ್ಷೇತ್ರದ ಸಮಸ್ಯೆಗಳು, ಈಡೇರಿಸಬೇಕಾದ ಭರವಸೆಗಳು, ಕ್ಷೇತ್ರದ ಪ್ರಗತಿಗೆ ಆದ್ಯತೆ ನೀಡುವುದು ಹಾಗೂ ಯಾವುದೇ ವರ್ಗಗಳ ನಡುವೆ ತಾರತಮ್ಯ ಮಾಡದೆ ಎಲ್ಲರಿಗೂ ಅಭಿವೃದ್ಧಿಯ ಸಮಪಾಲು ಹಂಚುವುದು.

2008 ರಲ್ಲಿ ನಾನು ಚುನಾಯಿತನಾದಾಗ ನಾನು ಐದನೇ ಬಾರಿ ವಿಧಾನಸಬೆಗೆ ಆಯ್ಕೆಯಾಗಿದ್ದೆ. ಅದಕ್ಕೂ ಮುನ್ನ 1994 ರಿಂದ 1999 ರವರೆಗಿನ ಅವಧಿಯಲ್ಲಿ ಸಚಿವನಾಗಿದ್ದು, ಪಶುಸಂಗೋಪನೆ, ನಗರಾಭಿವೃದ್ಧಿ ಹಾಗೂ ಸಾರಿಗೆ ಸಚಿವನಾಗಿ ಸೇವೆ ಸಲ್ಲಿಸಿದ್ದೇನೆ. ಆಗೆಲ್ಲಾ ನಾನು ನನ್ನ ಶಕ್ತಿಮೀರಿ ಕ್ಷೇತ್ರದ, ನಾಡಿನ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಕೆಲಸ ಮಾಡಿದ್ದೇನೆ. ಇಂದು ಹೊಸಕೋಟೆ, ರಾಜ್ಯದಲ್ಲಿ ಪ್ರಗತಿಯ ಮುಂಚೂಣಿಯಲ್ಲಿರುವ ಕೆಲವು ತಾಲ್ಲೂಕುಗಳಲ್ಲಿ ಒಂದಾಗಿದ್ದರೆ ಅದಕ್ಕೆ ನನ್ನ ಅಳಿಲು ಸೇವೆಯೂ ಸ್ವಲ್ಪಮಟ್ಟಿಗೆ ಕಾರಣ ಎಂದು ನಾನು ನಮ್ರತೆಯಿಂದ ಭಾವಿಸುತ್ತೇನೆ.

ನನ್ನ ಹಿರಿಯರು, ಅದರಲ್ಲೂ ಮುಖ್ಯವಾಗಿ ನನ್ನ ಚಿಕ್ಕಪ್ಪನವರಾದ ದಿವಂಗತ ಚನ್ನಭೈರೇಗೌಡರು, ಹಲವಾರು ದಶಕಗಳ ಕಾಲ ಹೊಸಕೋಟೆ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ್ದಾರೆ. ಅಂತಹ ಹಿರಿಯರ ಆಶೀರ್ವಾದ-ಅನುಗ್ರಹದಿಂದ, ನಾನು ರಾಜಕೀಯದಲ್ಲಿದ್ದು, ಜನತೆಗೆ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದೆ ಎಂದು ನಂಬಿದ್ದೇನೆ. [ಮುಂದೆ ಓದಿ]